Bharathipura Bharathipura

Bharathipura

    • $10.99

    • $10.99

Publisher Description

'ಭಾರತೀಪುರ', ಸೃಷ್ಟ್ಯಾತ್ಮಕ ಬರಹಗಾರನೊಬ್ಬ ಕಂಡ ಆಳವಾದ ಒಂದು ವಿರಸದ ಸಮಗ್ರ ಪರಿಚಯದ ಅಸಲುಚಿತ್ರ. ಮೌಲ್ಯಗಳ, ಕಟ್ಟಡಗಳ, ವ್ಯಕ್ತಿಗಳ ನಡುವಣ ಈ ವಿರಸಕ್ಕೆ ಸಾಹಿತ್ಯಕವಾದದ್ದೇ ಅಲ್ಲದೆ, ಬಹುಬಾರಿ ಸಮಾಜಶಾಸ್ತ್ರದ್ದು ಹಾಗೂ ಒಮ್ಮೊಮ್ಮೆ ದಾರ್ಶನಿಕವಾದದ್ದು ಆದ ಆಯಾಮವೂ ಉಂಟು. ವಸ್ತುಸ್ಥಿತಿಯ ಮಟ್ಟದಲ್ಲಿ, ಕಾನಂಬರಿಯ ಮುಖ್ಯ ಗೊಡವೆ ಸಂಪ್ರದಾಯಬದ್ಧ ಸಮಾಜದ ಆಧುನೀಕರಣ; ಆ ಸಮಾಜದ ಮೂರ್ತ-ಅಮೂರ್ತ ಸಂಕೇತಗಳನ್ನು ತೊಡೆದುಹಾಕುವುದು; ಕನಿಷ್ಠ ಅವುಗಳನ್ನು ಅಪಮೌಲ್ಯಗೊಳಿಸುವುದು, ಹೊಸ ವಸ್ತುಸ್ಥಿತಯನ್ನು, ಮೌಲ್ಯಗಳನ್ನು ನಿರ್ಮಿಸುವುದು. ವ್ಯಕ್ತಿಯ ಮಟ್ಟದಲ್ಲಿ ಅದರ ಮುಖ್ಯ ಗೊಡವೆ ಬ್ರಾಹ್ಮಣ ಜಮೀನ್ದಾರನ ಕುಟುಂಬದಲ್ಲಿ ಹುಟ್ಟಿದ ಧೀಮಂತನೊಬ್ಬ ತನ್ನ ಜಾತಿ ಹಾಗೂ ವರ್ಗಗಳಿಂದ ಮುಕ್ತನಾಗಿ ತನ್ನ ವರ್ಗ-ಜಾತಿಯ ಶೋಷಣೆಗೆ ಗುರಿಯಾಗಿದ್ದ ದಲಿತರ ಜೊತೆಗೆ ಏಕೀಭಾವ ಸಾಧಿಸುವುದರ ಸಂಕಟ. ಇವೆಲ್ಲನ್ನು ಕಟ್ಟಿಕೊಟ್ಟಿರುವ ಕಾದಂಬರಿ ಮುಗಿಯುವುದು ಹೇಗೆ, ಬರಹಗಾರ ಕಾದಂಬರಿಯನ್ನು ಹೇಗೆ ಅಂತ್ಯಗೊಳಿಸಿದ್ದಾನೆ ಅನ್ನುವುದನ್ನು ತಿಳಿಯಲು ಓದಿ ಭಾರತೀಪುರ.

GENRE
Fiction
NARRATOR
BM
Balaji Manohar
LANGUAGE
KN
Kannada
LENGTH
10:42
hr min
RELEASED
2023
August 30
PUBLISHER
Storyside IN
SIZE
445.9
MB