Vamshavriksha Vamshavriksha

Vamshavriksha

    • $14.99

    • $14.99

Publisher Description

ಪ್ರಸಿದ್ದ ಕಾದಂಬರಿಕಾರ ಎಸ್.ಎಲ್.ಭೈರಪ್ಪನವರ 'ವಂಶವೃಕ್ಷ' ಕಾದಂಬರಿ ಬದುಕಿನ ಬೇರುಗಳನ್ನು ಶೋಧಿಸುವ ಕೃತಿಯಾಗಿದೆ. ಬದುಕಿನ ಸೂಕ್ಷ್ಮ, ಸಂಕೀರ್ಣ ನೆಲೆಗಳ ಆಳಕ್ಕಿಳಿದು ಪ್ರಖರವಾದ ವೈಚಾರಿಕ, ತಾತ್ತ್ವಿಕ, ಮಾನವೀಯ ಅಂಶಗಳನ್ನು ಸಂವೇದನಾಶೀಲತೆಯಿಂದ ಶೋಧಿಸುವ ಕಾದಂಬರಿ 'ವಂಶವೃಕ್ಷ'. ಈ ಕಾದಂಬರಿಯಲ್ಲಿ ಆಧ್ಯಾತ್ಮ, ವಿದವೆಯ ಮರು ಮದುವೆ, ಎರಡನೇ ಮದುವೆ, ಪ್ರೀತಿ, ಕಟ್ಟು ಪಾಡು ಎಲ್ಲವನ್ನು ಕಾದಂಬರಿಕಾರರು ಚಿತ್ರಿಸಿದ್ದಾರೆ. 1965 ಭಾರತದಲ್ಲಿ ವಿಧವೆಯ ಮರು ವಿವಾಹವೆಂದರೆ ಮೂಗು ಮುರಿಯುತ್ತಿದ್ದರು ಅಂಥ ಕಾಲದಲ್ಲಿ ಈ ಕಾದಂಬರಿಯನ್ನು ಬರೆದಿದ್ದಾರೆ. ಇಲ್ಲಿ ಬರುವ ಪಾತ್ರಗಳು ಸಮಾಜದ ಕಟ್ಟು ಪಾಡನ್ನು ಮುರಿದು ಹೊಸ ಜೀವನಕ್ಕೆ ನಾಂದಿ ಹಾಡುತ್ತಾರೆ.

ಈ ಕಾದಂಬರಿಯನ್ನು ಆಧರಿಸಿ ಬಿ.ವಿ. ಕಾರಂತ್ ಹಾಗೂ ಗಿರೀಶ್ ಕಾರ್ನಾಡ್ ಅವರು 'ವಂಶವೃಕ್ಷ' ಚಲನಚಿತ್ರ ನಿರ್ದೇಶಿಸಿದರು. ಹಿಂದಿ, ಮರಾಠಿ, ಗುಜರಾತಿ, ತೆಲುಗು, ಉರ್ದು, ಇಂಗ್ಲಿಷ್ ಮೊದಲಾಗಿ ಹಲವು ಭಾಷೆಗಳಿಗೆ ಅನುವಾದಿತವಾಗಿ ಭಾರತದ ಶ್ರೇಷ್ಠ ಕಾದಂಬರಿಗಳಲ್ಲೊಂದು ಎಂಬ ಮನ್ನಣೆಯನ್ನು ಗಳಿಸಿಕೊಂಡಿದೆ.

GENRE
Fiction
NARRATOR
VA
Various Artists
LANGUAGE
KN
Kannada
LENGTH
17:28
hr min
RELEASED
2022
July 10
PUBLISHER
Storyside IN
SIZE
849.5
MB